ಆವಾವ ವ್ರತಕ್ಕೂ ಗುರು ಲಿಂಗ ಜಂಗಮನೆ ಮೂಲಮಂತ್ರ.
ಆವಾವುದ ತಾ ಕೊಂಬ ಕೊಡುವಲ್ಲಿ
ಲಿಂಗ ಜಂಗಮನ ಮುಂದಿಟ್ಟುಕೊಂಬುದೆ ಶುದ್ಧಕ್ರೀ.
ಹೀಗಲ್ಲದೆ,ಲಿಂಗ ಜಂಗಮ ಹೊರತೆಯಾಗಿ
ಮತ್ತೊಂದು ಕೊಂಡೆನಾಯಿತ್ತಾದಡೆ,
ಎನಗದಲ್ಲದ ದ್ರವ್ಯ, ಎನಗಿದೆ ಭಾಷೆ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಸಾಕ್ಷಿಯಾಗಿ.
Art
Manuscript
Music
Courtesy:
Transliteration
Āvāva vratakkū guru liṅga jaṅgamane mūlamantra.
Āvāvuda tā komba koḍuvalli
liṅga jaṅgamana mundiṭṭukombude śud'dhakrī.
Hīgallade,liṅga jaṅgama horateyāgi
mattondu koṇḍenāyittādaḍe,
enagadallada dravya, enagide bhāṣe.
Ācārave prāṇavāda rāmēśvaraliṅgasākṣiyāgi.