Index   ವಚನ - 19    Search  
 
ಉಳ್ಳೆ,ಹೇರಂಡ ಮಹಿಷಿ ಇವೆಲ್ಲವ ನಿಷೇಧವೆಂದು ಬಿಟ್ಟಲ್ಲಿ ಕೊಲ್ಲದ ಕೊಲೆಯ ಕೊಲಲೇತಕ್ಕೆ? ವ್ರತಿಗಳಲ್ಲಿ ಗೆಲ್ಲ ಸೋಲಕ್ಕೆ ಹೋರಲೇತಕ್ಕೆ? ಪ್ರಮಥರೆಲ್ಲರು ಅಲ್ಲಿ ಇಲ್ಲಿಯವರೆಂದು, ಪ್ರಮಾಣಿಸಬಹುದೆ? ಸರ್ಪ ಎತ್ತ ಮುಟ್ಟಿದಲ್ಲಿಯೂ ಪ್ರಾಣಕ್ಕೆ ಹೆಚ್ಚು ಕುಂದಿಲ್ಲ. ಶರಣರತ್ತ ಇತ್ತಣವರೆಂದಡೆ ಭಕ್ತಿಗೆ ಹಾನಿ, ಸತ್ಯಕ್ಕೆ ದೂರ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ, ಮುನ್ನವೆ ದೂರ.