Index   ವಚನ - 21    Search  
 
ಎನ್ನ ಲಿಂಗದ ಸೀಮೆಯಲ್ಲಿದ್ದ ಗೋವತ್ಸ ಮೊದಲಾದ ಘಟಕ್ಕೆಲ್ಲಕ್ಕೂ ಶಿವಲಿಂಗಪೂಜೆ, ಪಂಚಾಚಾರಶುದ್ಧ ನೇಮ. ಭಾವ ತಪ್ಪದೆ ಪಾದೋದಕ ಪ್ರಸಾದವಿಲ್ಲದೆ ತೃಣ ಉದಕವ ಮುಟ್ಟಿದಡೆ ಎನ್ನ ಸೀಮೆಗೆ, ಎನ್ನ ವ್ರತಾಚಾರಕ್ಕೆ, ನಾ ಕೊಂಡ ಗಮನಕ್ಕೆ- ತನುವಿಗೆ ಬಂದಲ್ಲಿ ಭೀತಿ, ಆತ್ಮಕ್ಕೆ ಬಂದಲ್ಲಿ ಸಂದೇಹವ ಮಾಡಿದಡೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.