Index   ವಚನ - 20    Search  
 
ಎಂಬತ್ತುನಾಲ್ಕು ಲಕ್ಷ ವ್ರತದೊಳಗಾದ ಶೀಲ- ಸಂಭವಿಸಿ ನಿಂದುದು ಅರುವತ್ತುನಾಲ್ಕು. ಅರುವತ್ತುನಾಲ್ಕರಲ್ಲಿ ಸಂಭವಿಸಿ ನಿಂದುದು ಮೂವತ್ತಾರು. ಮೂವತ್ತಾರರಲ್ಲಿ ಸಂಭವಿಸಿ ನಿಂದುದು ಇಪ್ಪತ್ತೈದು. ಇಪ್ಪತ್ತೈದರೊಳಗಾಗಿ ಸಂಭವಿಸಿ ನಿಂದುದು ಮೂರೆಯಾಯಿತ್ತು. ಮೂರು ವ್ರತಕ್ಕೆ ಮುಕುತವಾಗಿ, ತಬ್ಬಿಬ್ಬುಗೊಳ್ಳುತ್ತಿದ್ದೇನೆ. ನಾ ಹಿಡಿದ ಒಂದು ನೇಮಕ್ಕೆ ಸಂದೇಹವಾಗಿ, ಒಂದನೂ ಕಾಣದಿದ್ದೇನೆ. ಒಂದರ ಸಮಶೀಲಕ್ಕೆ ಸತಿಪುತ್ರರು ಎನ್ನಂಗದೊಳಗಿರರು. ಎನ್ನಂಗದ ಜೀವಧನ ಹೊಂದಿ ಹೋದಾಗ ಎನ್ನಂಗದ ವ್ರತ ಅಲ್ಲಿಯೆ ಬಯಲು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ ಕಡೆ ನಡು ಮೊದಲಿಲ್ಲ.