Index   ವಚನ - 28    Search  
 
ಒಂದ ವಿಶೇಷವೆಂದು ಹಿಡಿದು, ಮತ್ತೊಂದಧಮವ ಮುಟ್ಟದಿದ್ದುದೆ ಭರಿತಾರ್ಪಣ. ಪರಸ್ತ್ರೀ ಪರಧನಂಗಳಲ್ಲಿ ದುರ್ವಿಕಾರ ದುಶ್ಚರಿತ್ರದಲ್ಲಿ ಒಡಗೂಡದಿಪ್ಪುದೆ ಭರಿತಾರ್ಪಣ. ಮರವೆಯಲ್ಲಿ ಬಂದ ದ್ರವ್ಯವ ತಾನರಿದು ಮುಟ್ಟಿದಲ್ಲಿಯೆ ಭರಿತಾರ್ಪಣ. ತನ್ನ ವ್ರತ ನೇಮ ನಿತ್ಯಕೃತ್ಯಕ್ಕೆ ಅಪರಾಧ ಬಂದಲ್ಲಿ ಸಕಲವ ನೇತಿಗಳೆದು, ಆ ವ್ರತ ನೇಮದ ಆಳಿ ತಪ್ಪದೆ ಸಲೆ ಸಂದುದು ಭರಿತಾರ್ಪಣ. ಹೀಗಲ್ಲದೆ ಓಗರ ಮೇಲೋಗರದ ಲಾಗಿಗೆ ಭರಿತಾರ್ಪಣವುಂಟೆಂದು ನುಡಿವುದು ಸಹಜವೆ! ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಭರಿತಾರ್ಪಣದ ಸಹಜದ ಭಾವ.