Index   ವಚನ - 29    Search  
 
ಒಡೆಯರ ಕಟ್ಟಳೆಯೆಂದು ಮಾಡಿಕೊಂಡು ಆಡುವ ತನಕ ಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೆ? ಒಡೆಯರಂತೆ, ಮನೆಗೊಡೆಯನಂತೆ, ಗಡಿತಡಿಯಲ್ಲಿ ಕಾಯಲುಂಟೆ! ಅದು ತುಡುಗುಣಿಕಾರರ ನೇಮ.ಒಡೆಯರತ್ತ ನಾವಿತ್ತ. ಗಡಿಗೆಯ ತುಪ್ಪ, ಹೆಡಿಗೆಯ ಮೃಷ್ಟಾನ್ನ, ತುಡುಗುಣಿಯಂತೆ ತಿಂಬವಂಗೆ ಮತ್ತೊಡೆಯರ ಕಟ್ಟಳೆಯೆ? ಇಂತೀ ಕಡುಕರ ಕಂಡು ಅಂಜಿದೆಯಲ್ಲಾ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ?