ಒಡೆಯರ ಕಟ್ಟಳೆಯೆಂದು ಮಾಡಿಕೊಂಡು ಆಡುವ ತನಕ
ಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೆ?
ಒಡೆಯರಂತೆ, ಮನೆಗೊಡೆಯನಂತೆ,
ಗಡಿತಡಿಯಲ್ಲಿ ಕಾಯಲುಂಟೆ!
ಅದು ತುಡುಗುಣಿಕಾರರ ನೇಮ.ಒಡೆಯರತ್ತ ನಾವಿತ್ತ.
ಗಡಿಗೆಯ ತುಪ್ಪ, ಹೆಡಿಗೆಯ ಮೃಷ್ಟಾನ್ನ,
ತುಡುಗುಣಿಯಂತೆ ತಿಂಬವಂಗೆ
ಮತ್ತೊಡೆಯರ ಕಟ್ಟಳೆಯೆ?
ಇಂತೀ ಕಡುಕರ ಕಂಡು ಅಂಜಿದೆಯಲ್ಲಾ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ?
Art
Manuscript
Music
Courtesy:
Transliteration
Oḍeyara kaṭṭaḷeyendu māḍikoṇḍu āḍuva tanaka
aṅgaḷa bāgilalli guḍigūri enabahude?
Oḍeyarante, manegoḍeyanante,
gaḍitaḍiyalli kāyaluṇṭe!
Adu tuḍuguṇikārara nēma.Oḍeyaratta nāvitta.
Gaḍigeya tuppa, heḍigeya mr̥ṣṭānna,
tuḍuguṇiyante timbavaṅge
mattoḍeyara kaṭṭaḷeye?
Intī kaḍukara kaṇḍu an̄jideyallā
ācārave prāṇavāda rāmēśvaraliṅgā?