ಒಂದ ವಿಶೇಷವೆಂದು ಹಿಡಿದು,
ಮತ್ತೊಂದಧಮವ ಮುಟ್ಟದಿದ್ದುದೆ ಭರಿತಾರ್ಪಣ.
ಪರಸ್ತ್ರೀ ಪರಧನಂಗಳಲ್ಲಿ ದುರ್ವಿಕಾರ ದುಶ್ಚರಿತ್ರದಲ್ಲಿ
ಒಡಗೂಡದಿಪ್ಪುದೆ ಭರಿತಾರ್ಪಣ.
ಮರವೆಯಲ್ಲಿ ಬಂದ ದ್ರವ್ಯವ ತಾನರಿದು
ಮುಟ್ಟಿದಲ್ಲಿಯೆ ಭರಿತಾರ್ಪಣ.
ತನ್ನ ವ್ರತ ನೇಮ ನಿತ್ಯಕೃತ್ಯಕ್ಕೆ ಅಪರಾಧ ಬಂದಲ್ಲಿ
ಸಕಲವ ನೇತಿಗಳೆದು, ಆ ವ್ರತ ನೇಮದ ಆಳಿ ತಪ್ಪದೆ
ಸಲೆ ಸಂದುದು ಭರಿತಾರ್ಪಣ.
ಹೀಗಲ್ಲದೆ ಓಗರ ಮೇಲೋಗರದ ಲಾಗಿಗೆ
ಭರಿತಾರ್ಪಣವುಂಟೆಂದು ನುಡಿವುದು ಸಹಜವೆ!
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ
ಭರಿತಾರ್ಪಣದ ಸಹಜದ ಭಾವ.
Art
Manuscript
Music
Courtesy:
Transliteration
Onda viśēṣavendu hiḍidu,
mattondadhamava muṭṭadiddude bharitārpaṇa.
Parastrī paradhanaṅgaḷalli durvikāra duścaritradalli
oḍagūḍadippude bharitārpaṇa.
Maraveyalli banda dravyava tānaridu
muṭṭidalliye bharitārpaṇa.
Tanna vrata nēma nityakr̥tyakke aparādha bandalli
sakalava nētigaḷedu, ā vrata nēmada āḷi tappade
sale sandudu bharitārpaṇa.
Hīgallade ōgara mēlōgarada lāgige
bharitārpaṇavuṇṭendu nuḍivudu sahajave!
Ācārave prāṇavāda rāmēśvaraliṅgadalli
bharitārpaṇada sahajada bhāva.