Index   ವಚನ - 36    Search  
 
ಕೀಟಕ ವಿಹಂಗ ಮೊದಲಾದ ಆವ ಜೀವವು ಮುಟ್ಟಿದ ಫಲ ಕುಸುಮ ದ್ರವ್ಯಂಗಳ ಮುಟ್ಟದೆ, ಸಂದೇಹವಿದ್ದಲ್ಲಿ ಒಪ್ಪದೆ, ತಾ ಮಾಡಿಕೊಂಡ ಕೃತ್ಯಕ್ಕೆ ಆರನು ಆರೈಕೆಗೊಳ್ಳದೆ, ತಾ ತಪ್ಪಿದಲ್ಲಿ, ತಪ್ಪನೊಳಗಿಟ್ಟುಕೊಳಬೇಕೆಂದು, ಭಕ್ತರು ಜಂಗಮದ ಬಾಗಿಲಕಾಯದೆ ತಪ್ಪಿದಲ್ಲಿಯೆ ನಿಶ್ಚೈಸಿಕೊಂಡು ಮರ್ತ್ಯದ ಕಟ್ಟಳೆ ತಾನೆ ಎಂಬುದು ಕಟ್ಟಾಚಾರಿಯ ನೇಮ. ಇದು ನಿಷ್ಠೆವಂತರಿಗಿಕ್ಕಿದ ಗೊತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ.