ಗುರುವಾಗಿ ಬಂದು ತನುವ ಕೊರೆದಡೂ ಕೇಳೆ,
ಲಿಂಗವಾಗಿ ಬಂದು ಮನದಲ್ಲಿ ಕುಳ್ಳಿರ್ದು
ನಿಜಾಂಗವ ತೋರಿದಡೂ ಕೇಳೆ,
ಜಂಗಮವಾಗಿ ಬಂದು ಬಯಲ ಬೆಳಗಿನಲ್ಲಿ
ಒಳಗಾಗೆಂದಡೂ ಒಲ್ಲೆ.
ಅದೆಂತೆಂದಡೆ:
ಕುಟಿಲದಲ್ಲಿ ಬಂದು ವ್ರತವ ಕೆಡಿಸಿಹೆನೆಂದಡೆ,
ಕುಟಿಲದ ದೇವರುಂಟೆ?
ವ್ರತ ಮೊದಲು ಘಟ ಕಡೆಯಾಗಿ ಘಟಿಸುವೆನಲ್ಲದೆ,
ಮೂರು ಕಿಸುಕುಳಕಾಗಿ ಘಟವ ಹೊರೆದಡೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
Art
Manuscript
Music
Courtesy:
Transliteration
Guruvāgi bandu tanuva koredaḍū kēḷe,
liṅgavāgi bandu manadalli kuḷḷirdu
nijāṅgava tōridaḍū kēḷe,
jaṅgamavāgi bandu bayala beḷaginalli
oḷagāgendaḍū olle.
Adentendaḍe:
Kuṭiladalli bandu vratava keḍisihenendaḍe,
kuṭilada dēvaruṇṭe?
Vrata modalu ghaṭa kaḍeyāgi ghaṭisuvenallade,
mūru kisukuḷakāgi ghaṭava horedaḍe
ācārave prāṇavāda rāmēśvaraliṅgakke dūra.