ಗುರುವಾದಡೂ ಆಚಾರ ಭ್ರಷ್ಟನಾದಡೆ
ಅನುಸರಿಸಲಾಗದು.
ಲಿಂಗವಾದಡೂ ಆಚಾರ ದೋಹಳವಾದಲ್ಲಿ
ಪೂಜಿಸಲಾಗದು.
ಜಂಗಮವಾದಡೂ ಆಚಾರ
ಅನುಸರಣೆಯಾದಲ್ಲಿ ಕೂಡಲಾಗದು.
ಆಚಾರವೆ ವಸ್ತು, ವ್ರತವೆ ಪ್ರಾಣ, ಕ್ರಿಯೆಯೆ ಜ್ಞಾನ,
ಜ್ಞಾನವೆ ಆಚಾರ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
Art
Manuscript
Music
Courtesy:
Transliteration
Guruvādaḍū ācāra bhraṣṭanādaḍe
anusarisalāgadu.
Liṅgavādaḍū ācāra dōhaḷavādalli
pūjisalāgadu.
Jaṅgamavādaḍū ācāra
anusaraṇeyādalli kūḍalāgadu.
Ācārave vastu, vratave prāṇa, kriyeye jñāna,
jñānave ācāra.
Ācārave prāṇavāda rāmēśvaraliṅgavu tāne.