Index   ವಚನ - 51    Search  
 
ಚಿನ್ನ ಒಡೆದಡೆ ಕರಗಿದಡೆ ರೂಪಪ್ಪುದಲ್ಲದೆ, ಮುತ್ತು ಒಡೆದು ಕರಗಿದಡೆ ರೂಪಪ್ಪುದೆ? ಮರ್ತ್ಯದ ಮನುಜ ತಪ್ಪಿದರೊಪ್ಪಬೇಕಲ್ಲದೆ, ಸದ್ಭಕ್ತ ಸದೈವ ತಪ್ಪಿದಡೆ ಒಪ್ಪಬಹುದೆ? ಆಚಾರಕ್ಕು ಅಪಮಾನಕ್ಕು ಅಂಗವೆ ಕಡೆಯಿಲ್ಲದೆ, ಬೇರೊಂದಂಗವ ಮಾಡಿ ಗುರುಲಿಂಗಜಂಗಮದ ಮುಖದಿಂದ ಶುದ್ಧವೆಂದು ತಂದು ಕೂಡಿಕೊಳಬಹುದೆ? ಲಿಂಗ ಬಾಹ್ಯನ, ಆಚಾರ ಭ್ರಷ್ಟನ, ಜಂಗಮವ ಕೊಂದವನ ಇವರುವ ಕಂಡು ನುಡಿದಡೆ ಕುಂಭೀಪಾತಕಕ್ಕೆ ಒಳಗು; ಇದಕ್ಕೆ ಸಂದೇಹವಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ.