ದುಷ್ಟರಿಗಂಜಿ ಕಟ್ಟಿಕೊಳ್ಳಬಹುದೆ ಕಡ್ಡಾಯದ ವ್ರತವ?
ಆ ವ್ರತದ ವಿಚಾರವೆಂತೆಂದಡೆ:
ಅಲಗಿನ ತುಪ್ಪದ ಸವಿಗೆ ಲಲ್ಲೆಯಿಂದ ನೆಕ್ಕಿದಡೆ
ಅಲಗಿನ ಧಾರೆ ನಾಲಗೆಯ ತಾಗಿ,
ಆ ಜೀವ ಹಲುಬುವ ತೆರದಂತೆ.
ಒಲವರವಿಲ್ಲದ ಭಕ್ತಿ, ಛಲವಿಲ್ಲದ ನಿಷ್ಠೆ,
ಎಲವದ ಮರನ ಕಾಯ್ದ ವಿಹಂಗನಂತೆ.
ಇಂತೀ ಸಲೆನೆಲೆಯನರಿಯದವನ ವ್ರತಾಚಾರ
ಕೊಲೆ ಹೊಲೆ ಸೂತಕಕ್ಕೊಡಲಾಯಿತ್ತು.
ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗಕ್ಕೆ ಹೊರಗಾದ ನೇಮ.
Art
Manuscript
Music
Courtesy:
Transliteration
Duṣṭarigan̄ji kaṭṭikoḷḷabahude kaḍḍāyada vratava?
Ā vratada vicāraventendaḍe:
Alagina tuppada savige lalleyinda nekkidaḍe
alagina dhāre nālageya tāgi,
ā jīva halubuva teradante.
Olavaravillada bhakti, chalavillada niṣṭhe,
elavada marana kāyda vihaṅganante.
Intī saleneleyanariyadavana vratācāra
kole hole sūtakakkoḍalāyittu.
Ācārave prāṇavāda
rāmēśvaraliṅgakke horagāda nēma.