Index   ವಚನ - 74    Search  
 
ಧೂಳುಪಾವಡ ಕಂಠಪಾವಡ ಸರ್ವಾಂಗಪಾವಡ ಇಂತೀ ತ್ರಿವಿಧ ಶೀಲವ ನಡೆಸುವಲ್ಲಿ ಆ ಭೇದವನರಿತು, ಕಡೆ ನಡು ಮೊದಲು ಮೂರು ವ್ರತ ಕೂಡುವಲ್ಲಿ ವ್ರತದ ಬಿಡುಮುಡಿಯನರಿಯಬೇಕು. ಮನ ವಚನ ಕಾಯ ಈ ಮೂರರ ತೆರನ ಅರಿಯಬೇಕು. ಹೆಣ್ಣು ಹೊನ್ನು ಮಣ್ಣಿನಂಗವನರಿಯಬೇಕು. ಅರ್ಪಿತ, ಅನರ್ಪಿತ, ತೃಪ್ತಿ ಈ ಮೂರರ ಚಿತ್ರವನರಿಯಬೇಕು. ಮರ್ಕಟ ವಿಹಂಗ ಪಿಪೀಲಿಕ ಈ ಮೂರು ಮುಟ್ಟುವ ಭೇದವನರಿಯಬೇಕು. ಇಂತೀ ಇವು ಆವ ಶೀಲವಾದಡೂ ಭಾವಶುದ್ಧವಾಗಿರಬೇಕು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.