ನೆರಹಿ ಮಾಡುವ ಮಾಟ ಅಘಹರನ ಮುಟ್ಟದು.
ಬೇಡಿ ಮಾಡುವ ಮಾಟ ಪುಣ್ಯವೃದ್ಧಿಗೆ ಸಲ್ಲದು.
ಕೃತ್ಯಕ್ಕೆ ಒಡೆಯರ ಕಟ್ಟಳೆಯಿಲ್ಲದೆ ಒಲ್ಲೆನೆಂದಡೆ
ಮನಮುಟ್ಟದ ಕಟ್ಟಳೆಯ ಗುತ್ತಿಗೆಯ ಹೋದವರುಂಟೆ?
ನಿಶ್ಚಯವನರಿಯದ ಕೃತ್ಯವ ಮಾಡಿಕೊಂಡಂತೆ
ಮತ್ತೆ ಅದ ಬಿಟ್ಟು ಕೃತ್ಯವಿಲ್ಲದಿರೆ
ಮತ್ತೊಂದುವ ಮುಟ್ಟಿದೆನಾದಡೆ
ಹೊಟ್ಟೆಯೊಳಗಣ ಸತ್ತ ಕತ್ತೆಯಮರಿಯ
ನರಿಯು ತಿಂದು ಮಿಕ್ಕುದ ನಾಯಿತಿಂದಡೆ,
ಇದರಚ್ಚುಗಕ್ಕಂಜಿ ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗ ಗೊತ್ತಿಗೆ ಮರೆಯಾದ.
Art
Manuscript
Music
Courtesy:
Transliteration
Nerahi māḍuva māṭa aghaharana muṭṭadu.
Bēḍi māḍuva māṭa puṇyavr̥d'dhige salladu.
Kr̥tyakke oḍeyara kaṭṭaḷeyillade ollenendaḍe
manamuṭṭada kaṭṭaḷeya guttigeya hōdavaruṇṭe?
Niścayavanariyada kr̥tyava māḍikoṇḍante
matte ada biṭṭu kr̥tyavilladire
mattonduva muṭṭidenādaḍe
hoṭṭeyoḷagaṇa satta katteyamariya
nariyu tindu mikkuda nāyitindaḍe,
idaraccugakkan̄ji ācārave prāṇavāda
rāmēśvaraliṅga gottige mareyāda.