ಬಸವಣ್ಣ, ಚೆನ್ನಬಸವಣ್ಣ, ಪ್ರಭು,
ವೀರಮಡಿವಳ, ನಿಜಗುಣಶಿವಯೋಗಿ,
ಸಿದ್ಧರಾಮ, ಮೋಳಿಗೆಯಯ್ಯ,
ಆಯ್ದಕ್ಕಿಯ ಮಾರಯ್ಯ,ಏಕಾಂತರಾಮಯ್ಯ,
ಅಜಗಣ್ಣ, ಶಕ್ತಿ, ಮುಕ್ತಿ, ಮಹಾದೇವಿಯಕ್ಕ
ಮುಂತಾದ ಏಳುನೂರೆಪ್ಪತ್ತು
ಅಮರಗಣಂಗಳು ಕೊಟ್ಟ ವ್ರತಪ್ರಸಾದ.
ಆ ಪ್ರಸಾದ ಎನಗೆ ಪ್ರಸನ್ನ,
ನಿಮಗೆ ಮರ್ತ್ಯದ ಮಣಿಹ ಹಿಂಗುವನ್ನಕ್ಕ.
ಎನ್ನ ವ್ರತದಲ್ಲಿ, ಎನ್ನ ಆಚಾರದಲ್ಲಿ,
ನಾ ಹಿಡಿದ ನೇಮದಲ್ಲಿ, ಭಾಷೆಯಲ್ಲಿ,
ನಾ ತಪ್ಪಿದಡೆ, ತಪ್ಪ ಹೊತ್ತಲ್ಲಿ ನಿಮ್ಮ ಕೇಳಿದಡೆ,
ನಾ ಸತ್ತಿಹೆನೆಂದು ಕೂಡಿದಡೆ,
ಮತ್ತೆ ಶಸ್ತ್ರ ಸಮಾಧಿ ನೀರು ನೇಣು ವಿಷ
ಔಷಧಿಯಿಂದ ಘಟವ ಬಿಟ್ಟಡೆ ನಿಮ್ಮಾಣೆ
ನಿಮ್ಮ ಪ್ರಮಥರಾಣೆ.
ಕ್ರೀ ಭಿನ್ನಚಿಹ್ನದೋರದಲ್ಲಿಯೆ
ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗ ನಿನ್ನಲ್ಲಿಯೆ ಲೀಯ.
Art
Manuscript
Music
Courtesy:
Transliteration
Basavaṇṇa, cennabasavaṇṇa, prabhu,
vīramaḍivaḷa, nijaguṇaśivayōgi,
sid'dharāma, mōḷigeyayya,
āydakkiya mārayya,ēkāntarāmayya,
ajagaṇṇa, śakti, mukti, mahādēviyakka
muntāda ēḷunūreppattu
amaragaṇaṅgaḷu koṭṭa vrataprasāda.
Ā prasāda enage prasanna,
nimage martyada maṇiha hiṅguvannakka.
Enna vratadalli, enna ācāradalli,
nā hiḍida nēmadalli, bhāṣeyalli,
nā tappidaḍe, tappa hottalli nim'ma kēḷidaḍe,
Nā sattihenendu kūḍidaḍe,
matte śastra samādhi nīru nēṇu viṣa
auṣadhiyinda ghaṭava biṭṭaḍe nim'māṇe
nim'ma pramatharāṇe.
Krī bhinnacihnadōradalliye
ācārave prāṇavāda
rāmēśvaraliṅga ninnalliye līya.