Index   ವಚನ - 99    Search  
 
ಭರಿತಾರ್ಪಣವೆಂದು ಸ್ಥಲವನಂಗೀಕರಿಸಿದಲ್ಲಿ ಆ ಭರಿತ ಅಂಗಕ್ಕೊ, ಲಿಂಗಕ್ಕೊ, ಆತ್ಮಕ್ಕೊ, ಸರ್ವೇಂದ್ರಿಯ ವಿಕಾರಕ್ಕೊ? ಹಿಡಿವ, ಬಿಡುವ, ಕೊಡುವ, ಕೊಂಬ ಸಡಗರಿಸುವ ಎಡೆಗಳಲ್ಲಿಯೆ ಘೃತ, ರಸಾನ್ನ, ಸಕಲಪದಾರ್ಥಗಳ ಯಥೇಷ್ಟವಾಗಿ ಗ್ರಾಸಿಸುವ ಭರಿತವೊ? ಆತ್ಮನ ಕ್ಷುಧೆಯ ಆಶಾಪಾಶವೊ? ಅಲ್ಲ, ಲಿಂಗಕ್ಕೆ ಸಂದುದನೆಲ್ಲವನು ಒಂದೆ ಭಾವದಲ್ಲಿ ಕೊಳಬೇಕೆಂದು ಸಂದೇಹವೊ? ಇಂತೀ ಗುಣಂಗಳಲ್ಲಿ ಅಹುದಲ್ಲವೆಂಬುದ ತಿಳಿದು ನೋಡಿಕೊಳ್ಳಿ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.