Index   ವಚನ - 111    Search  
 
ಮಾಡಿ ನೀಡುವ ಭಕ್ತನನರಸಿಕೊಂಡು ಹೋಗಿ ಗಡ್ಡ ಮಂಡೆ ಬೋಳಿನ ಕುರುಹ ತೋರಿ, ಬಲ್ಲವರಂತೆ ಅಧ್ಯಾತ್ಮವ ನುಡಿದು ಉಪಾಧಿಯಿಂದ ಒಡಲ ಹೊರೆವಾತ ವಿರಕ್ತನೆ ಅಲ್ಲ. ವಿರಕ್ತನ ಪರಿ ಎಂತೆಂದಡೆ: ಆಚಾರಸಹಿತವಾಗಿ ಭಕ್ತಿ ಭಿಕ್ಷವ ತೆಗೆದುಕೊಂಡು ಉಪಾಧಿರಹಿತವಾಗಿಪ್ಪ ವಿರಕ್ತನ ತೋರಿ ಬದುಕಿಸಯ್ಯಾ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.