Index   ವಚನ - 110    Search  
 
ಮಹಾವ್ರತಸ್ಥರು ವ್ರತಿಗಳ ಮನೆಗೆ ಹೋದಲ್ಲಿ, ಕಂಡುದ ಬೇಡದೆ, ಬಾಯಿಗೆ ಬಂದಂತೆ ನುಡಿಯದೆ, ಕಾಮದೃಷ್ಟಿಯಲ್ಲಿ ಮತ್ತೇನುವ ನೋಡದೆ, ಶಿವಲಿಂಗಪೂಜೆ ಶಿವಧ್ಯಾನಮೂರ್ತಿ ಶಿವಕಥಾ ಪ್ರಸಂಗ ಶಿವಶರಣರ ಸಂಗ ತಮ್ಮ ಕ್ರಿಯಾನುಭಾವದ ವಿಚಾರ ಹೀಂಗಲ್ಲದೆ ಸರಸ, ಸಮೇಳ, ಪಗುಡಿ, ಪರಿಹಾಸಕ, ಚದುರಂಗ ನೆತ್ತ ಪಗಡಿ ಜೂಜು ಶಿವಭಕ್ತಂಗೆ ಉಂಟೆ? ಆತ್ಮನಲ್ಲಿದ್ದಡೆ ಎನ್ನ ಬೇಗೆ, ನುಡಿದಡೆ ಶರಣರ ಬೇಗೆ. ಈ ಒಡಲೇಕೆ ಅಡಗದು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನಿನ್ನ ಕೊರಳೇಕೆ ಉಡುಗದು.