Index   ವಚನ - 113    Search  
 
ಮೂಷಕ, ವಿಹಂಗ, ಕುಕ್ಕುಟ, ಮಾರ್ಜಾಲ, ಕುಕ್ಕುರ, ದೌಷ್ಟ್ರ ಇವು ಮೊದಲಾದ ನೇಮಿಗಳೆಲ್ಲರು ಸಿಕ್ಕಿದರಲ್ಲಾ! ನೀವು ಹಿಡಿದ ವ್ರತಕ್ಕೆ ಭಂಗಿತರಾಗಿ, ಭವಿಯ ಪರಾಪೇಕ್ಷದಿಂದ ದ್ರವ್ಯವ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆಂದು ಮರೆಯಲ್ಲಿ ಒಡಲ ಹೊರೆವ ಸುರೆಗುಡಿಹಿಗೆ ನೆರೆ ಭಕ್ತಿಯೇಕೆ? ವ್ರತಕ್ಕೆ ದೂರ, ಆಚಾರಕ್ಕೆ ಹೊರಗು: ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.