Index   ವಚನ - 119    Search  
 
ಲಿಂಗರೂಪ ನೋಡುವಲ್ಲಿ, ಗುರುಲಿಂಗಜಂಗಮವನರಿವಲ್ಲಿ, ಕಂಡ ದೋಷ ಸರಿಸುವದು ವ್ರತಾಂಗಿಗಳಿಗುಂಟೆ? ಅರ್ಥ ಪ್ರಾಣ ಅಭಿಮಾನವನು ಗುರುಲಿಂಗಜಂಗಮಕ್ಕೆಂದಿತ್ತು. ಮರ್ತ್ಯರು ಕೊಲುವಾಗ ಸತ್ತ ಸಾವ ನೋಡುತ್ತ ಮತ್ತವರಿಗಿನ್ನೆತ್ತಣ ವ್ರತ ಆಚಾರ ಭ್ರಷ್ಟರಿಗೆಲ್ಲಕ್ಕೆ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ನೇಮಕ್ಕೆ ತಪ್ಪಿದಡೆ ಹೊರಗೆಂಬೆ.