ಸಮಶೀಲ ನೇಮ ಒಂದಾದಲ್ಲಿ
ಉಡುವ ತೊಡುವ ಕೊಡುವ ಕೊಂಬ
ಅಡಿಯೆಡೆ ಮುಂತಾಗಿ
ಸಕ್ಕರೆಯ ಬುಡಶಾಖೆಯಂತೆ
ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ
ಕಟ್ಟಾಚಾರ ನಿಶ್ಚಯವಾದವಂಗೆ,
ಅಂಗ ಹಲವಲ್ಲದೆ ಕುಂದಣ ಒಂದೆ ಭೇದ.
ನೇಮ ಹಲವಲ್ಲದೆ ಜ್ಞಾನವೊಂದೆ ಭೇದ.
ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ,
ಬಂದ ಯೋನಿ ಒಂದೆ.
ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ.
ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ.
ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ,
ತಪ್ಪದು ನಿಮ್ಮಾಣೆ.
ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
Art
Manuscript
Music
Courtesy:
Transliteration
Samaśīla nēma ondādalli
uḍuva toḍuva koḍuva komba
aḍiyeḍe muntāgi
sakkareya buḍaśākheyante
madhurakke heccu kundillade ippa nēma
kaṭṭācāra niścayavādavaṅge,
aṅga halavallade kundaṇa onde bhēda.
Nēma halavallade jñānavonde bhēda.
Bhūmi halavallade appuvonde bhēda,
banda yōni onde.
Tā mundikkuva yōni ondāda kāraṇa.
Hiṭṭu halavādaḍe appadakallu ondeyādante.
Idu tappada ācāra, idakke mithyatathyavilla,
tappadu nim'māṇe.
Ācārakkar'hanāda rāmēśvaraliṅgave nīne balle.