ಸಪ್ಪೆಯ ವ್ರತವೆಂಬುದ ನಾವರಿಯೆವು,
ನೀವು ಹೇಳಿರಯ್ಯಾ.
ಸರ್ವ ಫಲರಸ, ಘೃತ, ತೈಲ, ಮಧುರ, ವಿದಳಧಾನ್ಯ
ಮುಂತಾದವಕ್ಕೆಎಲ್ಲಕ್ಕೂ ತಮ್ಮ ತಮ್ಮಲ್ಲಿಯ
ರುಚಿ ಸಪ್ಪೆಯ ನೇಮವನೊಂದನೂ ಕಾಣೆ.
ಇದ ನೀವೆ ಬಲ್ಲಿರಿ.
ಸಪ್ಪೆ ಯಾವುದೆಂದಡೆ
ಸುಖ-ದುಃಖಂಗಳೆಂಬುದನರಿಯದೆ,
ತನುವಾಡಿದಂತೆ ಆಡದೆ,
ಮನ ಹರಿದಂತೆ ಹರಿಯದೆ,
ಬಯಕೆ ಅರತು ಭ್ರಾಮಕ ಹಿಂಗಿ
ಸರ್ವವಿಕಾರ ವಿಸರ್ಜನವಾಗಿ,
ಹಿಂದಾದುದ ಮರೆದು ಮುಂದಕ್ಕೆ ಗತಿಯೆಂದು
ಒಂದ ಕಾಣದೆ,
ಹಿಂದು ಮುಂದೆಂದು ಒಂದನರಿಯದಿದ್ದುದೆ ಸಪ್ಪೆ.
ಇದು ಅಂತರಂಗದ ವ್ರತ
ಲವಣವ ಬಿಟ್ಟುದು ಬಹಿರಂಗ ಶೀಲ.
ಇಂತೀ ಉಭಯವ್ರತ ಏಕವಾದಲ್ಲಿ ಸರ್ವಸಪ್ಪೆ ಸಂದಿತ್ತು
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ
ಸಪ್ಪೆಯ ವ್ರತ ಅರ್ಪಿತವಾಯಿತ್ತು.
Art
Manuscript
Music
Courtesy:
Transliteration
Sappeya vratavembuda nāvariyevu,
nīvu hēḷirayyā.
Sarva phalarasa, ghr̥ta, taila, madhura, vidaḷadhān'ya
muntādavakke'ellakkū tam'ma tam'malliya
ruci sappeya nēmavanondanū kāṇe.
Ida nīve balliri.
Sappe yāvudendaḍe
sukha-duḥkhaṅgaḷembudanariyade,
tanuvāḍidante āḍade,
mana haridante hariyade,
bayake aratu bhrāmaka hiṅgi
sarvavikāra visarjanavāgi,
hindāduda maredu mundakke gatiyendu
onda kāṇade,
hindu mundendu ondanariyadiddude sappe.
Idu antaraṅgada vrata
lavaṇava biṭṭudu bahiraṅga śīla.
Intī ubhayavrata ēkavādalli sarvasappe sandittu
ācārave prāṇavāda rāmēśvaraliṅgakke
sappeya vrata arpitavāyittu.