ಅಂಗದ ಕಳೆ ಲಿಂಗಸಂಗವಾಗಿ,
ಅಂಗವೆಂಬ ಶಂಕೆಯ ಭಂಗವ ತೊರದು.
ಲಿಂಗಾಂಗಸಂಗವೆಂಬ ಸಂದ ಮೀರಿ
ಪರಮಪ್ರಕಾಶದಿಂದ ಬೆಳಗುವ
ಸ್ವಯಂಜ್ಯೋತಿ
ನಿಜದಲ್ಲಿ ನಿಂದು ತನ್ಮಯವಾದ
ಪರಮಲಿಂಗಕಾಯರು ಸಚ್ಚರಿತ್ರ ನಿಶ್ಚಿಂತರು,
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
Art
Manuscript
Music
Courtesy:
Transliteration
Aṅgada kaḷe liṅgasaṅgavāgi,
aṅgavemba śaṅkeya bhaṅgava toradu.
Liṅgāṅgasaṅgavemba sanda mīri
paramaprakāśadinda beḷaguva
svayan̄jyōti
nijadalli nindu tanmayavāda
paramaliṅgakāyaru saccaritra niścintaru,
saurāṣṭra sōmēśvarā, nim'ma śaraṇaru.