ಅಂಗದಂತೆ ಲಿಂಗವಾಗಿರ್ದ ದೇಹ,
ಲಿಂಗದಂತೆ ಅಂಗವಾಗಿರ್ದ ದೇಹ,
ಈ ಕಾಯದ್ವಯಂಗಳಿಗೆ
ಅಂಗಕಳಾ ಲಿಂಗಕಳಾ ಪ್ರಭಾವ ಒಂದಾಗಿ,
ತನುವಿನ ಕೈಮುಟ್ಟಿ ಪ್ರಾಣಲಿಂಗ
ಜಂಗಮದಾಸೋಹ ಮಾಡುತ್ತಿರಲು,
ಆ ಜಂಗಮದ ಸ್ಥೂಲಪ್ರಾಸಾದವೆ ಬಸವಣ್ಣನ ಸಾಕಾರ.
ಅಂತಪ್ಪ ಸಾಕಾರವನರಿವುತ್ತಿದ್ದರಿವು
ಸೌರಾಷ್ಟ್ರ ಸೋಮೇಶ್ವರಲಿಂಗ ತಾನಾಗಿ,
ನೆನೆವುತ್ತ ನೆನೆವುತ್ತ ನೆನೆಯದಂತಿರ್ದೆನಯ್ಯಾ.
Art
Manuscript
Music
Courtesy:
Transliteration
Aṅgadante liṅgavāgirda dēha,
liṅgadante aṅgavāgirda dēha,
ī kāyadvayaṅgaḷige
aṅgakaḷā liṅgakaḷā prabhāva ondāgi,
tanuvina kaimuṭṭi prāṇaliṅga
jaṅgamadāsōha māḍuttiralu,
ā jaṅgamada sthūlaprāsādave basavaṇṇana sākāra.
Antappa sākāravanarivuttiddarivu
saurāṣṭra sōmēśvaraliṅga tānāgi,
nenevutta nenevutta neneyadantirdenayyā.