ಅಂಗದ ಮೇಲೆ ಶಿವಲಿಂಗಸಾಹಿತ್ಯವಿಲ್ಲದ ಅಂಗ
ಅನೇಕ ಅಘೋರಪಾಪಕ್ಕೆ ಅವಕಾಶವಾಗಿಪ್ಪುದಯ್ಯಾ.
ಇದಕ್ಕೆ ಶ್ರುತಿ:
``ಯಾ ತೇ ರುದ್ರ ಶಿವಾ ತನೂರಘೋರಪಾಪಕಾಶಿನೀ
ಇದು ಕಾರಣ ಗುರುಕಾರುಣ್ಯವ ಪಡೆದು
ಲಿಂಗಾನುಗ್ರಹಕನಾದ ಪ್ರಾಣಲಿಂಗಸಂಬಂಧಿಯೇ ಶಿವೈಕ್ಯನು.
ಅಂತಪ್ಪ ಶಿವೈಕ್ಯಂಗೆ ಅಧರ್ಮವೇ ಧರ್ಮ,
ವಿಷವೇ ಪಥ್ಯ, ಅರಿಯೇ ಮಿತ್ರರು.
ಅಂದೆಂತೆದಡೆ: ಅರಿರ್ಮಿತ್ರಂ ವಿಷಂ ಪಥ್ಯಂ ಅಧರ್ಮೋ ಧರ್ಮತಾಂ
ವ್ರಜೇತ್ ಪೂಜಿತೇ ಪಾರ್ವತೀನಾಥೇ ವಿಪರೀತೇ
ವಿಪರ್ಯಯಃ ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ
ಶರಣರಿಗೆ ಸರಿಯಿಲ್ಲವಾಗಿ ಅಪ್ರತಿಮರು.
Art
Manuscript
Music
Courtesy:
Transliteration
Aṅgada mēle śivaliṅgasāhityavillada aṅga
anēka aghōrapāpakke avakāśavāgippudayyā.
Idakke śruti:
``Yā tē rudra śivā tanūraghōrapāpakāśinī
idu kāraṇa gurukāruṇyava paḍedu
liṅgānugrahakanāda prāṇaliṅgasambandhiyē śivaikyanu.
Antappa śivaikyaṅge adharmavē dharma,
viṣavē pathya, ariyē mitraru.
Andentedaḍe: Arirmitraṁ viṣaṁ pathyaṁ adharmō dharmatāṁ
vrajēt pūjitē pārvatīnāthē viparītē
viparyayaḥ intendudāgi,
saurāṣṭra sōmēśvarana
śaraṇarige sariyillavāgi apratimaru.