ಅಂಗಲಿಂಗ ಮನಲಿಂಗ ಪ್ರಾಣಲಿಂಗ ಭಾವಲಿಂಗ
ಜ್ಞಾತೃ ಜ್ಞಾನ ಜ್ಞೇಯ ಲಿಂಗ, ಇದಕ್ಕೆ ಶ್ರುತಿ:
ಓಮಿದಂ ದೇವಾನಾಮಿದಂ ಸರ್ವಾನಾಮಿದಂ ಆತ್ಮಮಯಂ ದೇವಾಃ
ಓಂ ಚ ಮೇ ಶರಶ್ಚ ಮೇ ಭಯಂಚ ಮೇ ವಚಶ್ಚ ಮೇ
ಶ್ವಸನಂಚ ಮೇ ಶಿಖರಂಚ ಮೇ ಶೈಲಂಚ ಮೇ ವ್ರೀಹಿಶ್ಚ ಮೇ
ತಿಲಂಚ ಮೇ ಹೇಮಚ ಮೇ ವಿದುಂಚ ಮೇ ಪೂಷಂಚ ಮೇ
ತೃಣಂಚ ಮೇ ಧಾತೃಂಚ ಮೇ ಭೋಕ್ತೃಂಚ ಮೇ ಜ್ಞಾತೃಂಚ ಮೇ
ಜ್ಞೇಯಂಚ ಮೇ ದೇಹಶ್ಚ ಮೇ ಆತ್ಮಂಚ ಮೇ ಅಖಿಲಂಚ ಮೇ
ಇತ್ಯನ್ಯೋನ್ಯಂ ಉಪಯುಕ್ತೇ ವ್ಯತಿರಿಕ್ತಂ ತಸ್ಮೈ ತೇ ನಮಃ
ಇಂತೆಂದುದಾಗಿ, ಶಿವ ಸರ್ವಾವಯವವಾದ
ಸರ್ವಾಂಗಲಿಂಗಿಗಳನೆನಗೊಮ್ಮೆ
ತೋರಿಸಾ ಸೌರಾಷ್ಟ್ರ ಸೋಮೇಶ್ವರಾ.