ಅಂಗವೆಂಬ ಅಂಗನೆ ಆತ್ಮನೆಂಬ ಪುರುಷನನಪ್ಪಿ
ಮುಂಡೆತನವಿಲ್ಲದೆಯಿಪ್ಪ ಬೇಧವ ತಿಳಲಿದು ನೋಡಿರಣ್ಣಾ.
ಕುಂಟಣಿಯಾದ ಒಡಹುಟ್ಟಿದ ಮನ ನಪುಂಸಕನಾದ ಕಾರಣ
ಲಿಂಗಸಂಗಿಯಾದ ಹೋದ ಕೇಳಿರಣ್ಣಾ.
ಆತ್ಮನು ಪುರುಷನಾದಡೂ ಲಿಂಗವ
ಕೂಡುವ ಭರದಿಂದ ಸತಿಯಾಗಬಲ್ಲ. ಶರಣಸತಿ
ಲಿಂಗಪತಿಯೆಂಬುದುಂಟಾಗಿ,
ಶಿವಜ್ಞಾನವೆಂಬ ಸಖಿಯ ಕೈವಿಡಿದು
ಸೌರಾಷ್ಟ್ರ ಸೋಮೇಶ್ವರಲಿಂಗವ ಕೂಡಿ ಸುಖಿಯಾದನು.
Art
Manuscript
Music
Courtesy:
Transliteration
Aṅgavemba aṅgane ātmanemba puruṣananappi
muṇḍetanavilladeyippa bēdhava tiḷalidu nōḍiraṇṇā.
Kuṇṭaṇiyāda oḍahuṭṭida mana napunsakanāda kāraṇa
liṅgasaṅgiyāda hōda kēḷiraṇṇā.
Ātmanu puruṣanādaḍū liṅgava
kūḍuva bharadinda satiyāgaballa. Śaraṇasati
liṅgapatiyembuduṇṭāgi,
śivajñānavemba sakhiya kaiviḍidu
saurāṣṭra sōmēśvaraliṅgava kūḍi sukhiyādanu.