ಅಗಣಿತನದ್ವಯನನುಪಮನಪ್ಪ
ಅಭವಂಗೆ ಭವರಹಿತನಾಗಿ ಭಕ್ತಿಯ ಮಾಡಬೇಕಲ್ಲದೆ,
ತಾನು ಭವದೊಳ್ಬಿರ್ದು,
ಬಂಧನಕ್ಕೊಳಗಾಗಿ, ಮತ್ರ್ಯರಿಗೆ ತೊತ್ತಾಗಿ,
ಮಾಯಾಪಾಶದ ಕಾಲಕಣ್ಣಿಯೊಳು ಸಿಕ್ಕಿ,
ಕಾಮಂಗೆ ಗುರಿಯಾಗಿ,
ಕಾಲಂಗೆ ಕೈವಶವಾಗಿ,
ಮಾಡುವ ಭಕ್ತಿಗೆ ನಾಚರು ನೋಡಾ.
ಸೊಣಗನ ಹಿಂದೆ ಸೊಣಗ ಹರಿದಂತಾಯಿತ್ತಯ್ಯಾ,
ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Agaṇitanadvayananupamanappa
abhavaṅge bhavarahitanāgi bhaktiya māḍabēkallade,
tānu bhavadoḷbirdu,
bandhanakkoḷagāgi, matryarige tottāgi,
māyāpāśada kālakaṇṇiyoḷu sikki,
kāmaṅge guriyāgi,
kālaṅge kaivaśavāgi,
māḍuva bhaktige nācaru nōḍā.
Soṇagana hinde soṇaga haridantāyittayyā,
saurāṣṭra sōmēśvarā.