Index   ವಚನ - 26    Search  
 
ಅತ್ಯತಿಷ್ಠದ್ದಶಾಂಗುಲವೆಂದೆಂಬರಿ, ಅತ್ಯವಾವುದು? ತಿಷ್ಠವಾವುದು? ದಶಾಂಗುಲ ವಾವುದು? ಬಲ್ಲಡೆ ನೀವು ಹೇಳಿರೇ. ವಾಙ್ಮನಾತೀತವೆಂದೆಂಬಿರಿ, ವಾಗುವುದು?ಮನವಾವುದು? ಅತೀತವಾವುದು? ಬಲ್ಲಡೆ ನೀವು ಹೇಳಿರೇ. ಅನುಭಾವಗೋಷ್ಠಿಯಿದು ಪರವಿದು ಸಂಗವಿದೆಂದರಿತು, ಶ್ರುತಿಜ್ಞಾನ ಮತಿಜ್ಞಾನ ಸಮ್ಯಜ್ಞಾನ ಅವಧಿಜ್ಞಾನ ಪರಮಜ್ಞಾನದಿಂ ಪರವಶವಾಗಿಪ್ಪುದೆ ಕೇವಲಜ್ಞಾನದ ನಿರ್ಲೇಪ ಕಾಣಾ,ಸೌರಾಷ್ಟ್ರ ಸೋಮೇಶ್ವರಾ .