Index   ವಚನ - 30    Search  
 
ಅಧೋಮುಖವಾಗಿಪ್ಪ ಹೃದಯಕಮಲವನೂರ್ಧ್ವಮುಖವ ಮಾಡಿ, ಮೇಲಿಪ್ಪ ಚೌದಳವ ಮುಟ್ಟದೆ, ಎಂಟೆಸಳನೊಂದೆ ಎಸಳ ಮಾಡಿ, ಅಂತರಾತ್ಮನು ಪರಮಾತ್ಮನ ಸಂಗವ ಮಾಡುವಲ್ಲಿ ಅಷ್ಟಾದಶದೋಷವಿರಹಿತನಾಗಿ, ಒಂದೆಸಳ ಸುಜ್ಞಾನಮಧ್ಯದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗವನರಿಸಿ ಬೆರಸಬಲ್ಲ.