ಅರುವಿನ ತರಹರದಿಂದ ಬಾವ ಸಧ್ಭಾವನೆಯ್ದಿದ ಶರಣನ
ಭಾವದೂಳಗೆ ಲಿಂಗದೇವ
ಲಿಂಗದೊಳಗೆ ಸಧ್ಭಾವ ಭೇಧವಿಲ್ಲದೆ
ಮಾರ್ಗಕ್ರೀ ಮೀರಿದರ್ಕ್ರೀಗತೀತನಾದ ಲಿಂಗೈಕ್ಯನ
ಪ್ರಾಣನೊಳಗೆ ಲಿಂಗ, ಲಿಂಗಭಾವದೂಳಗೆ ಪ್ರಾಣ
ಇಂತೀ ಶಿವಭಾವವೇ ಜೀವವಾಗಿಪ್ಪ ಶರಣಂಗೆ
ಲಿಂಗ ಮುಖವಾದ ಸತ್ಪಥವಿದೇ ಕಂಡಯ್ಯ,
ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Aruvina taraharadinda bāva sadhbhāvaneydida śaraṇana
bhāvadūḷage liṅgadēva
liṅgadoḷage sadhbhāva bhēdhavillade
mārgakrī mīridarkrīgatītanāda liṅgaikyana
prāṇanoḷage liṅga, liṅgabhāvadūḷage prāṇa
intī śivabhāvavē jīvavāgippa śaraṇaṅge
liṅga mukhavāda satpathavidē kaṇḍayya,
saurāṣṭra sōmēśvarā.