Index   ವಚನ - 45    Search  
 
ಅರಿವುಳ್ಳವರೆಲ್ಲಾ ಎಡೆಯಲ್ಲಿ ಉಂಟು, ನಿರಗೆಗಂಡವರಪೂರ್ವವಯ್ಯಾ. ವಾಕುಪಾಕವಾದವರೆಲ್ಲ ಎಡೆಯೊಳು ಉಂಟು, ಬೆರಗು ಹತ್ತಿದವರಪೂರ್ವವಯ್ಯಾ. ಬೆರಗು ಹತ್ತಿದವರೆಲ್ಲಾ ಎಡೆಯೊಳು ಉಂಟು, ಮನಪಾಕವಾದವರಪೂರ್ವವಯ್ಯಾ. ಸೌರಾಷ್ಟ್ರ ಸೋಮೇಶ್ವರಲಿಂಗವೆಂಬವರೆಲ್ಲಾ ಎಡೆಯಲುಂಟು ಎಂದೆಂದು ತಾನಾದವರಪೂರ್ವವಯ್ಯಾ