ಅಷ್ಟಭೋಗಂಗಳಭಿಲಾಷೆಯಿಂದಿಪ್ಪ ವೇಷಧಾರಿಗಳಿಗೆ
ಶಿವಜ್ಞಾನ, ಶಿವಯೋಗ, ಶಿವಧ್ಯಾನಂಗಳಿಲ್ಲ ನೋಡಯ್ಯಾ.
ಅಂತಪ್ಪ ಶಿವಜ್ಞಾನ ಶಿವಯೋಗ ಶಿವಧ್ಯಾನಗಳಿಲ್ಲದೆ
ಲಿಂಗವ ಕಾಣಬಾರದು.
ಅದಕ್ಕೆ ಶ್ರುತಿ:
`ತೇ ಧ್ಯಾನಯೋಗಾನುಗತಾ ಅಪಶ್ಯನ್ ದೇವಾತ್ಮಶಕ್ತಿಂ ಸ್ವಗುಣೈರ್ನಿಗೂಢಾಂ,
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರಲಿಂಗವನರಿವಡೆ
ಸ್ವಾನುಭಾವದಿಂದಲ್ಲದರಿಯಬಾರದು.
Art
Manuscript
Music
Courtesy:
Transliteration
Aṣṭabhōgaṅgaḷabhilāṣeyindippa vēṣadhārigaḷige
śivajñāna, śivayōga, śivadhyānaṅgaḷilla nōḍayyā.
Antappa śivajñāna śivayōga śivadhyānagaḷillade
liṅgava kāṇabāradu.
Adakke śruti:
`Tē dhyānayōgānugatā apaśyan dēvātmaśaktiṁ svaguṇairnigūḍhāṁ,
intendudāgi,
saurāṣṭra sōmēśvaraliṅgavanarivaḍe
svānubhāvadindalladariyabāradu.