ಅಸಮಾನಾಢ್ಯರಪ್ರತಿಮಸ್ವತಂತ್ರ
ಸ್ವಲೀಲರಪ್ಪ ಶರಣರೆಂತಿಪ್ಪರಯ್ಯಾ?
ಕಡವರವ ನುಂಗಿದ ಪೊಡವಿಯಂತೆ,
ರತ್ನವ ನುಂಗಿದ ರತ್ನಾಕರನಂತೆ,
ಬೆಳಗ ನುಂಗಿದ ಬಯಲಂತೆ,
ಬಣ್ಣವ ನುಂಗಿದ ಚಿನ್ನದಂತೆ,
ತೈಲವ ನುಂಗಿದ ತಿಲದಂತೆ,
ಪ್ರಭೆಯ ನುಂಗಿದ ಪಾಷಾಣದಂತೆ,
ವೃಕ್ಷವ ನುಂಗಿದ ಬೀಜದಂತೆ,
ಪ್ರತಿಬಿಂಬವ ನುಂಗಿದ ದರ್ಪಣದಂತಿಪ್ಪರಯ್ಯಾ.
ಸೌರಾಷ್ಟ್ರ ಸೋಮೇಶ್ವರಾ,
ನಿಮ್ಮ ಶರಣರಲ್ಲಿ ನೀವಿಹ ಭೇದವ ನೀವೆ ಬಲ್ಲಿರಿ,
ಆನೆತ್ತ ಬಲ್ಲೆನಯ್ಯಾ?
Art
Manuscript
Music
Courtesy:
Transliteration
Asamānāḍhyarapratimasvatantra
svalīlarappa śaraṇarentipparayyā?
Kaḍavarava nuṅgida poḍaviyante,
ratnava nuṅgida ratnākaranante,
beḷaga nuṅgida bayalante,
baṇṇava nuṅgida cinnadante,
tailava nuṅgida tiladante,
prabheya nuṅgida pāṣāṇadante,
vr̥kṣava nuṅgida bījadante,
pratibimbava nuṅgida darpaṇadantipparayyā.
Saurāṣṭra sōmēśvarā,
nim'ma śaraṇaralli nīviha bhēdava nīve balliri,
ānetta ballenayyā?