ಅಸ್ತಿ ಭಾತಿ[ಕ್ರಿ]ಯವೆಂಬ ತ್ರಿವಾಕ್ಯದಿಂದಲ್ಲವಾದುದಲ್ಲ.
ಅಪ್ರಮಾಣ ಅಗೋಚರ ಆತ್ಯತಿಷ್ಠದ್ದಶಾಂಗುಲ
ಅಭೇದ್ಯದಿಂ ನಾಮರೂಪುಗಳುಂಟಾದುದಲ್ಲ.
ಇದು ಕಾರಣ ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ
ಮೂರ್ತನಲ್ಲ ಭಾವಿಯಲ್ಲ ಪ್ರಾಣಿಯಲ್ಲ ಇದಕ್ಕೆ ಶ್ರುತಿ:
ನೈವಂಚೋವಾಚಾಸ್ತ್ರೀಯಾನ್ ಭೂಮಾನಚನಸ್ತ್ರೀ
ಪುಮಾನ್ನಪುಮಾನ್ ಪ್ರಮಾನ್ನಪ್ರಮಾನ್
ಭವಾನ್ ಯೇನೇದಂ ವದತಿ ಶತ್ವನಃ ಇತಿ ಬ್ರಹ್ಮಾ
ಎಂಬ ಉಪನಿಷದುಕ್ತಿಯನರಿದು ಅರಿವೆ ತಾನಾಗಿ
ಲಿಂಗದಲ್ಲಿ ಸಂದುಭೇದವಿಲ್ಲದೆ ಇಪ್ಪರಯ್ಯಾ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
Art
Manuscript
Music
Courtesy:
Transliteration
Asti bhāti[kri]yavemba trivākyadindallavādudalla.
Apramāṇa agōcara ātyatiṣṭhaddaśāṅgula
abhēdyadiṁ nāmarūpugaḷuṇṭādudalla.
Idu kāraṇa strīyalla puruṣanalla napunsakanalla
mūrtanalla bhāviyalla prāṇiyalla idakke śruti:
Naivan̄cōvācāstrīyān bhūmānacanastrī
pumānnapumān pramānnapramān
bhavān yēnēdaṁ vadati śatvanaḥ iti brahmā
emba upaniṣaduktiyanaridu arive tānāgi
liṅgadalli sandubhēdavillade ipparayyā
saurāṣṭra sōmēśvarā, nim'ma śaraṇaru.