Index   ವಚನ - 56    Search  
 
ಆಕಾಶದಲಾಡುವ ಹದ್ದನೊಂದು ಸರ್ಪ ನುಂಗಿತ್ತ ಕಂಡೆ. ಆ ಸರ್ಪ ಕಿಚ್ಚಿನೊಳು ಬಿದ್ದು ನಿಂದುರಿವುದ ಕಂಡೆ. ಷಣ್ಮುಖನ ಶಿರ ಹರಿದು ಬಯಲಾದುದ ಕಂಡೆ. ಉರಿ ಕೆಟ್ಟಲ್ಲಿ ಕರಿಯಿಲ್ಲ, ಭಸಿತವಿಲ್ಲ. ಈ ಪರಿಯ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರೆ ಬಲ್ಲರು.