Index   ವಚನ - 59    Search  
 
ಆಚಾರದನುವಳವಟ್ಟು, ಕರಣಂಗಳನುಡುಗಿ, ತನುವ ಸವೆವುದು ಗುರುವಿನಲ್ಲಿ. ವ್ರತನೇಮಂಗಳಿಂ ಪಲ್ಲಟವಿಲ್ಲದೆ, ಮನವ ಸವೆವುದು ಲಿಂಗದಲ್ಲಿ. ಆಶೆ ರೋಷಗಳಿಲ್ಲದೆ ಆದರಣೆಯಿಂ ಧನವ ಸವೆವುದು, ಜಂಗಮದಲ್ಲಿ. ಇಂತೀ ತ್ರಿವಿಧದಲ್ಲಿ ತ್ರಿವಿಧ ಸವೆದು ಪ್ರಳಯಪ್ರಕೃತಿಗೊಳಗಾಗದೆ, ಸುಜ್ಞಾನಮುಖದಿಂ ಪ್ರಸಾದವ ಹಿಂಗದೆ ಗ್ರಹಿಸಿಪ್ಪ ಭಕ್ತನನೇನೆಂದುಪಮಿಸುವೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.