ಆತ್ಮತೇಜದಿಂ ತೋರ್ಪ ಚಿದಹಮ್ಮಿನ ಮೂಲಾಹಂಕಾರವೆ
ಕಾಯದ ಮೊದಲಿಂಗೆ ಬೀಜವೆಂಬುದನರಿತು,
ಕೋಹಂ ಕೋಹಂ ಸೋಹಂ ಅಳಿದು ಬೀಜ ನಷ್ಟವಾಗಿ,
ವೃಕ್ಷವಡಗಿ ಯಜ್ಞಸೂತ್ರದ ತ್ರಿನಾಡಿಯ ತ್ರಿಸರ ಹರಿದು,
ಚೈತನ್ಯ ನಿಶ್ಚ್ಯೆತನ್ಯವಾದಲ್ಲಿ,
ಸೌರಾಷ್ಟ್ರ ಸೋಮೇಶ್ವರಲಿಂಗ ನಿರುತ ಭರಿತ.
Art
Manuscript
Music
Courtesy:
Transliteration
Ātmatējadiṁ tōrpa cidaham'mina mūlāhaṅkārave
kāyada modaliṅge bījavembudanaritu,
kōhaṁ kōhaṁ sōhaṁ aḷidu bīja naṣṭavāgi,
vr̥kṣavaḍagi yajñasūtrada trināḍiya trisara haridu,
caitan'ya niścyetan'yavādalli,
saurāṣṭra sōmēśvaraliṅga niruta bharita.