ಆದಿ ಅನಾದಿಯಿಲ್ಲದಂದು,
ನಾದ ಬಿಂದು ಕಳೆ ಮೊಳೆದೋರದಂದು,
ಶ್ರುತಿ ಸ್ಮತಿಗಳು ತಲೆದೋರದಂದು,
ಚತುರ್ದಶಭುವನಂಗಳ ರಚನೆ ರಚಿಸದಂದು,
ಲಯಭೋಗಾದಿ ಕರಣಂಗಳಲ್ಲಿಯ
ತತ್ವಪ್ರಭಾವ ಮೂರ್ತಿಗಳೆಂಬ
ಅರಿವು ಕುರುಹಿಗೆ ಬಾರದಂದು,
ತಿಥಿ, ವಾರ, ನಕ್ಷತ್ರ, ಯೋಗ, ಕರಣಂಗಳೆಂಬ
ಪಂಚಾಂಗ ಲಗ್ನವಿಲ್ಲದಂದು,
ಅನುಪಮ ಅಸಾಧ್ಯ ಅಭೇದ್ಯ ಸೌರಾಷ್ಟ್ರ ಸೋಮೇಶ್ವರಾ
ನಿಮ್ಮ ನಿಜವನಾರು ಬಲ್ಲರಯ್ಯಾ.
Art
Manuscript
Music
Courtesy:
Transliteration
Ādi anādiyilladandu,
nāda bindu kaḷe moḷedōradandu,
śruti smatigaḷu taledōradandu,
caturdaśabhuvanaṅgaḷa racane racisadandu,
layabhōgādi karaṇaṅgaḷalliya
tatvaprabhāva mūrtigaḷemba
arivu kuruhige bāradandu,
tithi, vāra, nakṣatra, yōga, karaṇaṅgaḷemba
pan̄cāṅga lagnavilladandu,
anupama asādhya abhēdya saurāṣṭra sōmēśvarā
nim'ma nijavanāru ballarayyā.