ಆ ಪರಬ್ರಹ್ಮವೆ ಓಂಕಾರವಪ್ಪ ಪ್ರಣವಸ್ವರೂಪು, ಪರಮಾತ್ಮನೆನಿಸಿ
ಪರಶಿವನಾಮದಿಂ ಪರಶಕ್ತಿಸಂಯುಕ್ತವಾಗಿ,
ಆಕಾರ ಉಕಾರ ಮಕಾರವೆಂಬ ಬೀಜಾಕ್ಷರಂಗಳಿಂ
ನಾದಬಿಂದುಕಳೆಯಾಗಿ,
ದಶನಾಡಿ ದಶವಾಯು ದಶವಿಧೇಂದ್ರಿಯ ಸಪ್ತಧಾತು
ಷಡುಚಕ್ರ ಷಡುವರ್ಗ ಪಂಚಭೂತ
ಚತುರಂತಃಕರಣ, ತ್ರಿದೋಷಪ್ರಕೃತಿ, ತ್ರಯಾವಸ್ಥೆ,
ಸತ್ವ ರಜ ತಮ, ಅಂಗ ಪ್ರಾಣ, ಅರಿವು ಭಾವ ಜ್ಞಾನ,
ಮೊದಲಾದ ಬಾಹತ್ತರ ನಿಯೋಗಮಂ ತಿಳಿದು
ಭೂಲೋಕ ಭುವರ್ಲೋಕ ಸ್ವರ್ಲೋಕ ಮಹರ್ಲೋಕ
ಜನಲೋಕ ತಪೋಲೋಕ, ಸತ್ಯಲೋಕ,
ಅತಳ, ವಿತಳ, ಸುತಳ, ಮಹಾತಳ, ರಸಾತಳ, ತಳಾತಳ,
ಪಾತಾಳಂಗಳೊಳಗಾದ ಚತುರ್ದಶಭುವನಂಗಳೊಳಹೊರಗೆ
ಅಂತರ್ಗತ ಬಹಿರ್ಗತವಾಗಿ,
ನಾದಮಂ ತೋರಿ ಭರ್ಗೋದೇವನೆಂಬ ನಾಮಮಂ ತಳೆದು
ಊಧ್ರ್ವರೇತುವೆನಿಸಿ,
ವಿಶ್ವತೋಮುಖ, ವಿಶ್ವತಶ್ಚಕ್ಷು, ವಿಶ್ವತೋ ಬಾಹು, ವಿಶ್ವತಃಪಾದದಿಂ
ವಿಶ್ವಗರ್ಭೀಕೃತವಾಗಿ, ಉತ್ಪತ್ತ್ಯಸ್ಥಿತಿಲಯಂಗಳನೆಣಿಕೆಗೆಯ್ಯದೆ
ದೇವತಾಂತರದಿಂ ಮಾನಸಾಂತರವನನುಕರಿಸಿ,
ಮಾನಸದಲ್ಲಿ ರವಿಕೋಟಿತೇಜದಿಂ ಸಕಲಪಾಪಾಂಧಕೂಪಮಂ ತೊಳೆದು
ಸುರಕ್ಷಿತದಿಂ ಪ[ರಾ] ಪಶ್ಯಂತಿ ಸುಮಧ್ಯ ವೈಖರಿಯೆಂಬ ಚತುರ್ವಿಧದಿಂ
ದುರಿತ ದುರ್ಮದ ಕಾಲಮೂಲಾದಿಮೂಲಮಂ ಬಗೆಗೊಳ್ಳದೆ,
ಚಿತ್ಸುಧಾಮೃತವೆ ಅಂಗವಾಗಿ ಚಿದರ್ಕಪ್ರಭಾಕರವೆ ಪ್ರಾಣವಾಗಿ,
ಸೌರಾಷ್ಟ್ರ ಸೋಮೇಶ್ವರನಿಂತಿಂತು ಕರ್ತನು-ಭರ್ತನು ತಾನೆ ಆಗಿ,
ಪರಮಸ್ವಯಂಭೂ ಸ್ವತಃಸಿದ್ಧದಿಂ ಸಚ್ಚಿದಾನಂದಸ್ವರೂಪದಿಂ
ನಿತ್ಯಪರಿಪೂರ್ಣತ್ವದಿಂದೆಡದೆರಹಿಲ್ಲದಿರ್ಪನಯ್ಯಾ.
Art
Manuscript
Music
Courtesy:
Transliteration
Ā parabrahmave ōṅkāravappa praṇavasvarūpu, paramātmanenisi
paraśivanāmadiṁ paraśaktisanyuktavāgi,
ākāra ukāra makāravemba bījākṣaraṅgaḷiṁ
nādabindukaḷeyāgi,
daśanāḍi daśavāyu daśavidhēndriya saptadhātu
ṣaḍucakra ṣaḍuvarga pan̄cabhūta
caturantaḥkaraṇa, tridōṣaprakr̥ti, trayāvasthe,
satva raja tama, aṅga prāṇa, arivu bhāva jñāna,
modalāda bāhattara niyōgamaṁ tiḷidu
bhūlōka bhuvarlōka svarlōka maharlōka
janalōka tapōlōka, satyalōka,
Ataḷa, vitaḷa, sutaḷa, mahātaḷa, rasātaḷa, taḷātaḷa,
pātāḷaṅgaḷoḷagāda caturdaśabhuvanaṅgaḷoḷahorage
antargata bahirgatavāgi,
nādamaṁ tōri bhargōdēvanemba nāmamaṁ taḷedu
ūdhrvarētuvenisi,
viśvatōmukha, viśvataścakṣu, viśvatō bāhu, viśvataḥpādadiṁ
viśvagarbhīkr̥tavāgi, utpattyasthitilayaṅgaḷaneṇikegeyyade
dēvatāntaradiṁ mānasāntaravananukarisi,Mānasadalli ravikōṭitējadiṁ sakalapāpāndhakūpamaṁ toḷedu
surakṣitadiṁ pa[rā] paśyanti sumadhya vaikhariyemba caturvidhadiṁ
durita durmada kālamūlādimūlamaṁ bagegoḷḷade,
citsudhāmr̥tave aṅgavāgi cidarkaprabhākarave prāṇavāgi,
saurāṣṭra sōmēśvaranintintu kartanu-bhartanu tāne āgi,
paramasvayambhū svataḥsid'dhadiṁ saccidānandasvarūpadiṁ
nityaparipūrṇatvadindeḍaderahilladirpanayyā.