ಆಯತ ಸ್ವಾಯತ ಸನ್ನಿಹಿತವೆಂದು ನುಡಿವ
ಅನಾಯತದ ಹೇಸಿಕೆಯನೇನಂಬೆನಯ್ಯಾ?
ತನುಗುಣಂಗಳನೊರಸದೆ,
ಭೋಗಭೂಷಣಂಗಳನತಿಗಳೆಯದೆ,
ಅನೃತ ಅಸತ್ಯ ಅಸಹ್ಯ ಋಣಸಂಚವಂಚನೆ
ಪರಧನಕ್ಕಳುಪದ ಆಯತ ಅಂಗಕ್ಕಿಲ್ಲ ಮತ್ತೆಂತಯ್ಯಾ?
ಆಯತವು ಮನೋವಿಕಾರವಳಿದು,
ಸರ್ವೇಂದ್ರಿಯಂಗಳಲ್ಲಿ ಸಾವಧಾನಿಯಾಗಿ,
ಅನ್ಯವಿಷಯ ಬ್ಥಿನ್ನರುಚಿಯ ಮರೆದು,
ಸಕಲಭ್ರಮೆ ನಷ್ಟವಾದ ಸ್ವಾಯತ ಮನಕ್ಕಿಲ್ಲ.
ಮತ್ತೆಂತಯ್ಯಾ ಸ್ವಾಯತವು?
ತನ್ನರಿವಿನ ಕುರುಹನರಿತು ನಿಜಸಾಧ್ಯವಾದ ಸನ್ನಹಿತ,
ಸದ್ಭಾವದಲ್ಲಿ ಅಳವಟ್ಟುದಿಲ್ಲದೆ
ಭಾಜನಕ್ಕೆ ಬರಿಯ ಮುಸುಕಿಟ್ಟು ಆಯತವೆಂದು ನುಡಿವ
ಅನಾಯತದ ನಾಚಿಕೆಯನೇನೆಂಬೆನಯ್ಯಾ,
ಸೌರಾಷ್ಟ್ರ ಸೋಮೇಶ್ವರಾ?
Art
Manuscript
Music
Courtesy:
Transliteration
Āyata svāyata sannihitavendu nuḍiva
anāyatada hēsikeyanēnambenayyā?
Tanuguṇaṅgaḷanorasade,
bhōgabhūṣaṇaṅgaḷanatigaḷeyade,
anr̥ta asatya asahya r̥ṇasan̄cavan̄cane
paradhanakkaḷupada āyata aṅgakkilla mattentayyā?
Āyatavu manōvikāravaḷidu,
sarvēndriyaṅgaḷalli sāvadhāniyāgi,
an'yaviṣaya bthinnaruciya maredu,
sakalabhrame naṣṭavāda svāyata manakkilla.
Mattentayyā svāyatavu?
Tannarivina kuruhanaritu nijasādhyavāda sannahita,
sadbhāvadalli aḷavaṭṭudillade
bhājanakke bariya musukiṭṭu āyatavendu nuḍiva
anāyatada nācikeyanēnembenayyā,
saurāṣṭra sōmēśvarā?