Index   ವಚನ - 77    Search  
 
ಇಲ್ಲವುಂಟೆಂಬ ಶಬ್ದನಿಃಶಬ್ದವೆಲ್ಲಾ ಮಹದಾಕಾಶದಲ್ಲಿಯೇ ಬಯಲಾಯಿತ್ತು. ಶೂನ್ಯವೆಂಬ ನಾಮರಹಿತನು ನಿಃಶೂನ್ಯವಾದ ಘನಕ್ಕೆ ಗಮನನಲ್ಲ. ನಿರ್ಗಮನ ಬಯಲ ಭಜಿಸಿ ಬಯಲ ಮೂರ್ತಿಗಳೆಲ್ಲಾ ಬಯಲಾಗಿ ಹೋದರು. ಮಹಾಬಯಲಿನ ನಿಲವನರಿದು ಇದರಂತುವನಾರು ಬಲ್ಲರಯ್ಯಾ, ಸೌರಾಷ್ಟ್ರ ಸೋಮೇಶ್ವರಾ ಲಿಂಗ್ಯಕ್ಯವಾದ ಶರಣ.