ಇಷ್ಟಲಿಂಗಕ್ಕೆ ರೂಪನರ್ಪಿಸಿ,
ಪರಾಣಲಿಂಗಕ್ಕೆ ರುಚಿಯನರ್ಪಿಸಿ
ತೃಪ್ತಿಲಿಂಗಕ್ಕೆ ಪರಿಣಾಮವನರ್ಪಿಸುವುದಲ್ಲದೆ
ಇಷ್ಟಲಿಂಗಕ್ಕೆ ರುಚಿಯಪ್ರಾಣಲಿಂಗಕ್ಕೆ ಪರಿಣಾಮವ
ತೃಪ್ತಿಲಿಂಗಕ್ಕೆ ರೂಪವನರ್ಪಿಸುವನರಿವು
ಹೊರಸಿನೆಕ್ಕೆಯ ಶಂಖದ
ಮಣಿಯ ಸರಗೊಳಿಸುವನಂತಾಯಿತ್ತು.
ಅಗ್ನಿಯ ಗಾಯವ ತೃಣದಲ್ಲಿ ಮಂತ್ರಿಸುವನಂತಾಯಿತ್ತು.
ಆಕಾಶಕ್ಕೆ ಮಂಜಿನ ಪಟವ ಹೊದಿಸುವನಂತಾಯಿತ್ತು.
ಇದರಂತುವನಾರು ಬಲ್ಲರಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರಲ್ಲದೆ.
Art
Manuscript
Music
Courtesy:
Transliteration
Iṣṭaliṅgakke rūpanarpisi,
parāṇaliṅgakke ruciyanarpisi
tr̥ptiliṅgakke pariṇāmavanarpisuvudallade
iṣṭaliṅgakke ruciyaprāṇaliṅgakke pariṇāmava
tr̥ptiliṅgakke rūpavanarpisuvanarivu
horasinekkeya śaṅkhada
maṇiya saragoḷisuvanantāyittu.
Agniya gāyava tr̥ṇadalli mantrisuvanantāyittu.
Ākāśakke man̄jina paṭava hodisuvanantāyittu.
Idarantuvanāru ballarayyā,
saurāṣṭra sōmēśvarā nim'ma śaraṇarallade.