ಈ ತಾಮಸ ರುದ್ರತ್ವದಿಂ ಸ್ಥಿರಚಿತ್ತದಿಂ ಸ್ವಯವಾದ ಲಿಂಗವೆಂದಡೆ
ಅಷ್ಟವಿಧಾರ್ಚನೆ ಷೋಡಶೋಪಚರಿಯ ಸಮಾಯದಿಂ ವೇಧಿಸಿ
ಬಿಡದೊಂದಿಸಿ ಚಿತ್ತಿನ ಸ್ಫುರಣೆಯ ಪ್ರಜ್ಞತ್ವದಿಂ
ಶಿವನಲ್ಲದತಃಪರವಿಲ್ಲವೆಂದರಿತುದಕ್ಕೆ ಶ್ರುತಿ:
ಇಮಾಂ ರುದ್ರಾಯ ಸ್ಥಿರಧನ್ವಿನೇ ಕ್ಷಿಪ್ರ[ಪ್ರಸಾದಾಯ]
ಸ್ವಧಾಮ್ನೇ[ದಿ]ವೋಧಾಯ ಸಹಮಾನಾಯ ವೇಧಸೇ
ತಿಗ್ಮಾಯುಧಾಯ ಗಿರಃ ಭಾರತ ಶ್ರುಣೋತು ನಃ
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ಅವಿನಾಭಾವದಿಂದಿಪ್ಪವರಪೂರ್ವವಯ್ಯಾ.
Art
Manuscript
Music
Courtesy:
Transliteration
Ī tāmasa rudratvadiṁ sthiracittadiṁ svayavāda liṅgavendaḍe
aṣṭavidhārcane ṣōḍaśōpacariya samāyadiṁ vēdhisi
biḍadondisi cittina sphuraṇeya prajñatvadiṁ
śivanalladataḥparavillavendaritudakke śruti:
Imāṁ rudrāya sthiradhanvinē kṣipra[prasādāya]
svadhāmnē[di]vōdhāya sahamānāya vēdhasē
tigmāyudhāya giraḥ bhārata śruṇōtu naḥ
intendudāgi,
saurāṣṭra sōmēśvaraliṅgadalli
avinābhāvadindippavarapūrvavayyā.