ಎಚ್ಚರು, ಕನಸು, ನಿದ್ರೆ, ಮೂರ್ಛೆ, ಅರಿವು, ಮರವೆ,
ಸಂಕಲ್ಪ, ವಿಕಲ್ಪ, ಅಹಂಮಮತೆ ರೂಪು ರುಚಿಯನರಿವುತಿರ್ಪ
ಮನವನರಿಯಬಹುದಲ್ಲದೆ ಅರಿವಿಂಗರಿವಾದಾತ್ಮನ ಅರಿಯಲುಂಟೆ?
ಸರ್ವಸಾಕ್ಷಿಕನಾದ ಆತ್ಮನನರಿವೊಡೆ ಶ್ರುತಿಗತೀತ,
ಬ್ರಹ್ಮವಿಷ್ಣುರುದ್ರಾದಿಗಳಿಗಳವಲ್ಲ,
ಸೌರಾಷ್ಟ್ರ ಸೋಮೇಶ್ವರಲಿಂಗ ಅಸಾಧ್ಯವಾದ ಕಾರಣ.
Art
Manuscript
Music
Courtesy:
Transliteration
Eccaru, kanasu, nidre, mūrche, arivu, marave,
saṅkalpa, vikalpa, ahammamate rūpu ruciyanarivutirpa
manavanariyabahudallade ariviṅgarivādātmana ariyaluṇṭe?
Sarvasākṣikanāda ātmananarivoḍe śrutigatīta,
brahmaviṣṇurudrādigaḷigaḷavalla,
saurāṣṭra sōmēśvaraliṅga asādhyavāda kāraṇa.