Index   ವಚನ - 85    Search  
 
ಎತ್ತನೇರಿ ಎತ್ತನರಸುವನಂತೆ, ತಾನಿರ್ದು ತನ್ನನರಸಿ ಕೇಳುವನಂತೆ, ಹೊತ್ತ ನಿಜವನರಿಯದತ್ತಲಿತ್ತ ಸುತ್ತಿ ಬಳಲುವನಂತೆ, ಹಿಡಿದಿರ್ದ ಲಿಂಗವ ಕಾಣದೆ ಮೂವಿಧಿಗಾಣ್ಬರನೇನೆಂಬೆನಯ್ಯಾ! ತನ್ನಲ್ಲಿಗುರುಲಿಂಗ ಜಂಗಮ ಪ್ರಸಾದ ಒಂದೆಂದು ಅರಿಯದ ಅಜ್ಞಾನಬದ್ಧರನೆನಗೆ ತೋರದಿರಯ್ಯಾ, ಸೌರಾಷ್ಟ್ರ ಸೋಮೇಶ್ವರಾ.