Index   ವಚನ - 87    Search  
 
ಎಲುವಿನ ನಿಲವು ಅಮೇಧ್ಯದಾಗರ ಉಚ್ಛಿಷ್ಟದೊರತೆ ಮಿದುಳ ಸದನ ಕೀವು ನೆಣದೋವರಿ ಜಂತಿನ ಜನ್ಮಭೂಮಿ ಕ್ರಿಮಿಯ ಗೂಡು ಶುಕ್ಲದ ಜೀಗೊಳವೆ ರುಧಿರದ ತಾಣ ಅಡಗಿನಂತರಂಗ ತೊಗಲಬಹಿರಂಗ ರೋಮರಾಜಿಯ ಜಾಳಂದ್ರ ನರದ ನೇಣಜಂತ್ರ ಆಧಿವ್ಯಾಧಿಯ ವಾಸ ಇಂತಿದರೊಳಗೆ ನಿನ್ನ ಕುಲಗೋತ್ರಂಗಳಾವುವು ಹೇಳಾ ಎಲೆ ಮರುಳೆ. ಇದಕ್ಕೆ ಶ್ರುತಿ: 'ಅಂತ್ಯಜಾತಿದ್ರ್ವಿಜಾತಿರ್ವಾ ಏಕಯೋನಿಸಮುದ್ಭವಃ ಸಪ್ತಧಾತುಮಯಂ ಪಿಂಡಂ ವರ್ಣಾನಾಂ ಕಿಂ ಪ್ರಯೋಜನಂ' ಇದನರಿತು ಷಡುಭ್ರಮೆಗಳಲ್ಲಿ ಭ್ರಮಿತರನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.