Index   ವಚನ - 89    Search  
 
ಏಕಮುಖದ ರುದ್ರಾಕ್ಷಿಯೊಂದನೆ ಶಿಖಿಯಲ್ಲಿ ಧರಿಸುವುದಯ್ಯಾ. ದ್ವಿತ್ರಿದ್ವಾದಶ ಮುಖದ ಮೂರು ಮಣಿಯ ಮೂಧ್ರ್ನಿಯಲ್ಲಿ ಧರಿಸುವುದಯ್ಯಾ. ಏಕಾದಶಮುಖದ ಮೂವತ್ತಾರು ಮಣಿಯ ಶಿರವ ಬಳಸಿ ಧರಿಸುವುದಯ್ಯಾ. ಐದು ಏಳು ಹತ್ತುಮುಖದ ರುದ್ರಾಕ್ಷಿಯ ಒಂದೊಂದು ದ್ವಿಕರ್ಣದಲ್ಲಿ ಧರಿಸುವುದಯ್ಯಾ. ಷಡಾಷ್ಟಮುಖದ ದ್ವಾತ್ರಿಂಶತ್ ರುದ್ರಾಕ್ಷಿಯ ಕಂಠದಲ್ಲಿ ಧರಿಸುವುದಯ್ಯಾ. ಚತುರ್ಮುಖದ ಪಂಚಾಶತ್ ರುದ್ರಾಕ್ಷಿಯ ಉರಮಾಲೆಯಾಗಿಧರಿಸುವುದಯ್ಯಾ. ತ್ರಿದಶಮುಖದ ದ್ವಾತ್ರಿಂಶ ರುದ್ರಾಕ್ಷಿಯ ದ್ವಿಬಾಹುಗಳಲ್ಲಿ ಧರಿಸುವುದಯ್ಯಾ. ನವಮುಖದ ಚತುರ್ವಿಂಶ ರುದ್ರಾಕ್ಷಿಯ ದ್ವಿಮಣಿಬಂಧದಲ್ಲಿ ಧರಿಸುವುದಯ್ಯಾ. ಚತುರ್ದಶಮುಖದ ರುದ್ರಾಕ್ಷಿಯ ಅಷ್ಟೋತ್ತರಶತವ ಉಪವೀತದಂತೆ ಧರಿಸುವುದಯ್ಯಾ. ಇಂತರಿದು ಧರಿಸಿದ ಶಿವಮಾಹೇಶ್ವರನ ಹೆಜ್ಜೆಹೆಜ್ಜೆಗೆ ಅಶ್ವಮೇಧಯಾಗದ ಫಲ ತಪ್ಪದಯ್ಯಾ ಸೌರಾಷ್ಟ್ರ ಸೋಮೇಶ್ವರಾ.