ಏಕಾಕಾರ ಲೋಕಾಕಾರ ನೀನಾಗಿ
ತೋರ್ಪೆಯಯ್ಯಾ ಸದ್ಭಾವಿಗಳಿಗೆ.
ಏಕಾಕಾರವೆ ಹುಸಿ, ಲೋಕಾಕಾರವೆ
ದಿಟವಾಗಿತೋರ್ಪೆಯಯ್ಯಾ ಭಾವಭ್ರಮಿತರಿಗೆ.
ಏಕಾಕಾರ ಲೋಕಾಕಾರ ಸರ್ವಾಕಾರವಾಗಿ
ತೋರ್ಪೆಯಯ್ಯಾ ನಿರ್ಭಾವರಿಗೆ.
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜದಾಕಾರ
ನೀವಾಗಿರ್ಪಿರಯ್ಯಾ ಭಾವೈಕ್ಯವಾದ ಮಹಂತರಿಗೆ.
Art
Manuscript
Music
Courtesy:
Transliteration
Ēkākāra lōkākāra nīnāgi
tōrpeyayyā sadbhāvigaḷige.
Ēkākārave husi, lōkākārave
diṭavāgitōrpeyayyā bhāvabhramitarige.
Ēkākāra lōkākāra sarvākāravāgi
tōrpeyayyā nirbhāvarige.
Saurāṣṭra sōmēśvarā nim'ma nijadākāra
nīvāgirpirayyā bhāvaikyavāda mahantarige.